ಪ್ರೀತಿ ಎಲ್ಲರಿಗೂ ಹುಟ್ಟತ್ತೆ,ಆದರೆ ಕೆಲವರಿಗೆ ಮಾತ್ರ ಸಿಗತ್ತೆ,ಸಿಕ್ಕರೂ ಕೆಲವರು ಮಾತ್ರ ಕಾಪಾಡಕೋತಾರೆ,ಕಾಪಾಡ್ಕೊಂಡು ಬದುಕೋಣ ಅಂದ್ಕೊಳ್ಳೋ ಹೊತ್ತಿಗೆ ವಿಧಿ ಅವರನ್ನ ಮತ್ತೆ ಆಗಲಿಸತ್ತೆ...:(ಪ್ರೀತಿಗೆ ಅಳಿಸಲೂ ಬರತ್ತೆ ನಗಿಸಲು ಬರತ್ತೆ...ಜೀವನದಲ್ಲಿ ಪ್ರೀತಿಯ ಅನುಭವವಿರಬೇಕುರೀ...ಆಗಲೇ ನೋವಿನ ಅನುಭವವಾಗತ್ತೆ...
ಈ ಪ್ರೀತಿ ಅಂದ್ರೆ ಏನು??ಯಾವುದೋ ಪುಸ್ತಕ ತೆಗೆದು ಕಣ್ಣಾಡಿಸಿದರೆ " ಪ್ರೀತಿಯೆಂದರೆ ಅಮೃತ" ಅಂತಿತ್ತು. ಹಾಗಾದರೆ ಕೆಲವರು ಯಾಕೆ ವಿಷ ತಗೊಳ್ಳುತ್ತಾರೆ? ಪ್ರೀತಿಯೆಂದರೆ ಬದುಕು ಅಂತಿತ್ತು, ಹಾಗಿದ್ದರೆ ಪ್ರೀತಿಯಲ್ಲಿ ಬಿದ್ದು ಸಾಯೋದೇಕೆ? "ಪ್ರೀತಿಯೆಂದರೆ ಗೆಲುವು?" ಮತ್ತ್ಯಾಕೆ ಕೆಲವರು ಸೋಲನುಭವಿಸುತ್ತಾರೆ? ಪ್ರೀತಿ ಸೋಲೇ ಆದರೆ ಮತ್ತ್ಯಾಕೆ ಕೆಲವರು ಮಾತ್ರ ಗೆಲ್ಲುತ್ತಾರೆ? "ಪ್ರೀತಿಯೆಂದರೆ ದೇವರು", ಹಾಗಾದರೆ ಕೈಕೊಟ್ಟ ಹುಡುಗ ಹುಡುಗಿಯರಿಂದಾಗಿ ಪರಿತಪಿಸುವ ಜೀವಗಳಿಗೆ ಆ ಅಪರಿಮಿತ ವಿರಹದ, ನೋವಿನ ಶಿಕ್ಷೆ ಯಾಕೆ ನೀಡುತ್ತಾನೆ?

No comments:
Post a Comment