Monday, May 3, 2010

ಜೀವನದ ನಿಜಾಂಶ..

ಎಲ್ಲರಿಗೂ  ಜೀವನದ ಬಗ್ಗೆ ಅವರವರದೇ ಆದ ಅನುಭವವಿರುತ್ತದೆ. ಹಾಗೆಯೇ ಒಬ್ಬರು ತಮ್ಮ ನೋವೆ  ಜಾಸ್ತಿ ಅಂತ ತಿಳ್ಕೊಂಡ್ರೆ ಆದರೆ ನಮಗಿಂತ ಹೆಚ್ಚಿನ ನೋವು ಸಂಕಟಗಳನ್ನ ಅನುಭವಿಸಿರುವವರು ಇದ್ದಾರೆ ಈ ಪ್ರಪಂಚದಲ್ಲಿ ಅನ್ನೋದನ್ನ ಮರೆತು ಬಿಡ್ತಾರೆ , ಹಾಗೆ ನಾವು ಯೋಚನೆ ಮಾಡ್ತಾ ಹೋದ್ರೆ ಈ ಜೀವನ ಅನ್ನೋದು ಒಂದು ಟ್ರೈನ್ ಪಯಣದ ತರಹ ..ಅಲ್ಲಿ ಜನ ಅವ್ರ ಊರಲ್ಲಿ ಹತ್ತುತ್ತಾರೆ ಅವರವರ ಸ್ಟೇಷನ್ ಬಂದಾಗ ಅವರು ಇಳಿಯುತ್ತಾರೆ,ಅಷ್ಟರಲ್ಲೇ ತಮಗಾಗಿ ನಮ್ಮ ಹೃದಯದಲ್ಲಿ ಸ್ವಲ್ಪ ಜಾಗ ತಗೊಂಡು ಹೋಗ್ತಾರೆ,ನೆನಪಾಗೆ ಉಳಿತಾರೆ , ಎಲ್ಲ ಕೇವಲ ನಿಮಿತ್ತ  ಅಷ್ಟೇ.ಯಾವುದು ಶಾಶ್ವತ ಅಲ್ಲ ಆದರು ನಾವು ನಂದು ನಂದು ಅಂತ ಅದೆಷ್ಟು ಹೊರಾಡ್ತೀವಿ ಅಲ್ವಾ?
?? ಛೆ..ಇಷ್ಟೇ ಲೈಫ್..ಆದರು ಎಷ್ಟೊಂದು ನೋವು ಅನುಭವಿಸ್ತೀವಿ..ಕೆಲವೊಂದು ಸರಿ ನಮಗಿಷ್ಟವಿಲ್ದಿದ್ದ್ರು ಕೆಲವೊಂದು ನಿರ್ಧಾರ ತಗೊಬೇಕಾದ ಪರಿಸ್ಥಿತಿಗಳು..ಸುಳಿಗೆ ದೋಣಿ ಸಿಲುಕಿದರೆ ಹೇಗೆ ತಾನೇ ಹೊರಗೆ ಬರಲು ಸಾದ್ಯ ಅಲ್ವಾ? ಒಟ್ಟಿನಲ್ಲಿ ಬದುಕಿನಲ್ಲಿ ಬರೋ ಸೋಳುಗಳನ್ನು ಎದುರಿಸಿ ಬದುಕಬೇಕು ಅಷ್ಟೇ....

Wednesday, March 17, 2010

ಏನೋ ನಿಜ ಅಲ್ವಾ ??!!

ಯಾವತ್ತೂ ಕಣ್ಣೀರು ಹಾಕುವುದಿಲ್ಲವೆಂದು ಹುಡುಗನ ನೆತ್ತಿ ಮುಟ್ಟಿ ಪ್ರಾಮಿಸ್ ಮಾಡಿದ್ದಳು. “ನಿಂಗೆ ನನ್ ಮೇಲೆ ಸ್ವಲ್ಪಾನು ಪ್ರೀತಿಯಿಲ್ಲ” ಅಂತ ಹುಡುಗ ಅಂದಕೂಡಲೇ ಕಣ್ಣೀರಿಟ್ಟಳು...

ಅಮ್ಮ

ಎಲ್ಲರೂ ಕಲಿತ ಮೊದಲ ಪದವೇ ಅಮ್ಮ ಅಲ್ಲವೇ?
ಎಲ್ಲರ ಬದುಕಲ್ಲೂ ಅಮ್ಮ ಅನ್ನುವ ಪದ ತುಂಬಾ ಅಮೂಲ್ಯ..ನಿಜವಾಗಲು ಆಕೆಯ ಪ್ರೀತಿ ಈ ಪ್ರಪಂಚದಲ್ಲೇ ಎಲ್ಲದಕ್ಕಿಂತಲೂ ಶ್ರೇಷ್ಠ. ನಾನು ಕೆಲವೊಂದು ಬಾರಿ ಅಂದ್ಕೋತೀನಿ ಅಮ್ಮ ಇಲ್ಲದೆ ಜೀವನವೇ ಪೂರ್ಣತೆ ಅನ್ಸೋಲ್ಲ,ಆಕೆ ಮಕ್ಕಳಿಗೆ ಮಾದರಿ..ಅವರುಗಳ ಜೀವನದಲ್ಲಿ ಆಕೆಯ ಮಹತ್ವ ಸ್ಥಾನ, ತುಂಬಾ ಜನ ಸಾಕಷ್ಟು ಬರೆದಿದ್ದಾರೆ ಅಮ್ಮನ ಬಗ್ಗೆ..ನಾನು ಅಂತ ದೊಡ್ಡ ಬರಹಗಾರ್ತಿಯಂತೂ ಅಲ್ಲ ...ಖಂಡಿತ ಕಡೆಯವರೆಗೂ ನಾ ಅಮ್ಮನ ಆಸೆ ಈಡೇರಿಸಲು ಪ್ರಯತ್ನಿಸ್ತೀನಿ..
ಆಗ ಅಮ್ಮ ಅಂತಿದ್ಳಂತೆ ಮಗ ಬಾರೋ ಊಟ ಮಾಡು ಅಂತ..
ಆದರೆ ಈಗ ಅಂತಾಳೆ ಮಗ ಊಟ ಹಾಕೋ ಅಂತ..ಎಂಥ ಕಾಲ ಅಲ್ವಾ? ನಾನು ಹೇಳುವುದಾದರೆ ದಯವಿಟ್ಟು ಯಾರೂ ಅಮ್ಮನನ್ನ ಅಳಿಸಬೇಡಿ...ಅದರ ನೋವು ಅಪಾರ...
ನನ್ನ ಈ ಪೋಸ್ಟ್ ಅಮ್ಮನಿಗೆ ಅರ್ಪಿತ..ಅಮ್ಮ ನಿನ್ನ ನಾ ಯಾವತ್ತಾದ್ರು ಬೇಸರ ಪಡಿಸಿದರೆ ನನ್ನ ಕ್ಷಮಿಸು..
ಅಮ್ಮ ನಾ ನಿನ್ನ ಯಾವಾಗಲೂ ಪ್ರೀತಿಸ್ತಿರ್ತೀನಿ ...

Wednesday, March 10, 2010

ಕಿವಿ ಮಾತು :)


ಹೇ ನನ್ನ ಓದುಗರೇ ..
ಕೆಲವೊಂದು ಸಾರಿ ನಾನು ಭಾವುಕತೆಗೆ ಒಳಗಾಗಿ ನನ್ನ ಕಣ್ಮುಂದೆ ನಡೆದ ಕೆಲವೊಂದು ಘಟನೆಗಳು ನನ್ನ ಜೀವನದಲ್ಲೇ ನಡೆದಿದೆ ಅನ್ನುವ ಹಾಗೆ ವರ್ತಿಸಿಬಿಡ್ತೀನಿ ..ಅಂಥಹ ಕೆಲವೊಂದು ಸನ್ನಿವೇಶಗಳನ್ನು ನಾ ನನ್ನ ಡೈರಿ ಲಿ ಬರೀತೀನಿ ಅಂದರೆ ನನ್ನ ಬ್ಲಾಗ್ ಲಿ ..:)
ದಯವಿಟ್ಟು ಎಲ್ಲವೂ ನನ್ನ ಜೀವನದಲ್ಲಿ ನಡೆದದ್ದೇ ಅಂತಾ ಮಾತ್ರ ಭಾವಿಸಬೇಡಿ ಪ್ಲೀಸ್ ರೀ....
ಮೊನ್ನೆ ನನ್ನ ಸ್ನೇಹಿತರು ಕರೆ ಮಾಡಿ ಕೇಳಿದರು ಎಲ್ಲ ನಿನ್ನ ಜೀವನದ ಕಥೇನಾ ಅಂತ ಅದು ಅಲ್ಲ ಅಂತ ಹೇಳೋದಕ್ಕೆನೆ ಈ ದಿನ ತಿಳಿಸುವ ಸಲುವಾಗಿ ಬರೆಯುತ್ತ ಇದ್ದೇನೆ ಅಷ್ಟೇ ...

Monday, March 8, 2010

ಪ್ರೀತಿಯ ಮಾತುಗಳು

ಪ್ರೀತಿ ಎಲ್ಲರಿಗೂ ಹುಟ್ಟತ್ತೆ,ಆದರೆ ಕೆಲವರಿಗೆ ಮಾತ್ರ ಸಿಗತ್ತೆ,ಸಿಕ್ಕರೂ ಕೆಲವರು ಮಾತ್ರ ಕಾಪಾಡಕೋತಾರೆ,ಕಾಪಾಡ್ಕೊಂಡು ಬದುಕೋಣ ಅಂದ್ಕೊಳ್ಳೋ ಹೊತ್ತಿಗೆ ವಿಧಿ ಅವರನ್ನ ಮತ್ತೆ ಆಗಲಿಸತ್ತೆ...:(ಪ್ರೀತಿಗೆ ಅಳಿಸಲೂ ಬರತ್ತೆ ನಗಿಸಲು ಬರತ್ತೆ...ಜೀವನದಲ್ಲಿ ಪ್ರೀತಿಯ ಅನುಭವವಿರಬೇಕುರೀ...ಆಗಲೇ ನೋವಿನ ಅನುಭವವಾಗತ್ತೆ...
ಈ ಪ್ರೀತಿ ಅಂದ್ರೆ ಏನು??ಯಾವುದೋ ಪುಸ್ತಕ ತೆಗೆದು ಕಣ್ಣಾಡಿಸಿದರೆ " ಪ್ರೀತಿಯೆಂದರೆ ಅಮೃತ" ಅಂತಿತ್ತು. ಹಾಗಾದರೆ ಕೆಲವರು ಯಾಕೆ ವಿಷ ತಗೊಳ್ಳುತ್ತಾರೆ? ಪ್ರೀತಿಯೆಂದರೆ ಬದುಕು ಅಂತಿತ್ತು, ಹಾಗಿದ್ದರೆ ಪ್ರೀತಿಯಲ್ಲಿ ಬಿದ್ದು ಸಾಯೋದೇಕೆ? "ಪ್ರೀತಿಯೆಂದರೆ ಗೆಲುವು?" ಮತ್ತ್ಯಾಕೆ ಕೆಲವರು ಸೋಲನುಭವಿಸುತ್ತಾರೆ? ಪ್ರೀತಿ ಸೋಲೇ ಆದರೆ ಮತ್ತ್ಯಾಕೆ ಕೆಲವರು ಮಾತ್ರ ಗೆಲ್ಲುತ್ತಾರೆ? "ಪ್ರೀತಿಯೆಂದರೆ ದೇವರು", ಹಾಗಾದರೆ ಕೈಕೊಟ್ಟ ಹುಡುಗ ಹುಡುಗಿಯರಿಂದಾಗಿ ಪರಿತಪಿಸುವ ಜೀವಗಳಿಗೆ ಆ ಅಪರಿಮಿತ ವಿರಹದ, ನೋವಿನ ಶಿಕ್ಷೆ ಯಾಕೆ ನೀಡುತ್ತಾನೆ?

Thursday, March 4, 2010

Thanks to E-System

Hi..
Whenever we feel somebody helped us or because of someone we feel happy then its obviously we say thanks to them..Today my thanks to E Technology,which made us to create a dairy to share our feelings to someone globally ...What we call it as a Blog !!!
There a few group of people who always writes their happy and sad moments in their dairies..As i am also one among them,i am feeling so happy to write blogs,dont know about my readers :)
I was knowing about blogs but didn't concentrated on creating my own blog,because of busy life of work.Recently i read my friend Gokul's blog and i felt to write,created and now feeling why did i started my Blog early itself...

Today is my Happy day....

Wednesday, March 3, 2010

My first Blog


This is my first Blog. Really am not getting what to write in my blog. Anyways i am starting with my introduction. later will tell you my life's experience one by one ;)…

I just wanna Cherish my childhood days...Because we cant forget our childhood days ..:)
As I was so talkative and in my no one were there to take care of me! I joined School in the age of 5 :)
I was also not happy to go to school as other kids,i was keen to learn new things from my childhood...When i was at the age 6,The incident happened ,in that i and my brother were lost on one evening. Actually my mom and dada( My papa) are working at different locations, one fine day I was feeling that my mom shouldn't go to work by leaving us alone in home, then i told the same to her but as she was not having enough leaves and she simply said that no dear, have to go ,you be in home and take care of brothers as i and dad will not be in home, i felt so bad, later as and when she went me and my brother Raki(rakesh-Who was of age 4 at that time) held our hands together and started following her,as she used to walk very fast as she was already late to work ,it was around 6Pm,as she was working as a head cook in the ladies hostel at that time,she was so fast we couldn't catch her speed finally we lost, we are not able to see at all :'( ....... Was totally blanked, as i couldn't guess where we were at that time ,i told same to my brother, he started crying, along with him i also started crying, later we saw one college campus, it was may be 8Pm,we sat there, it was already raining outside. I thought i have to forget my parents and my home everything, because i did not know address anything, was able to tell only names of my parents. Later one person on his bicycle came on that way, he saw us and asked about us, we both were shivering because of cold, I said my mom's name and told him that she will prepare food in one hostel, later he realized, finally dropped us to that hostel, as there were two hostels at the same location, he enquired the name of my mom with those people and dropped us to correct location, but unfortunately my mom was not there, at that time she already got a news that we both were lost somewhere, both my mom and dad were searching for us, finally they again came back to hostel and we all reached home around 10:30 pm. After 20 years I went to same college Campus to do my graduation where I gone there during my childhood!!! My Engineering College B.D.T.College of Engineering,Davangere