Saturday, March 29, 2014

Sorry



ಪ್ರೀತಿಯ ಪುಟ್ಟು





ನಿನಗೆ ಬೇಜಾರು ಮಾಡಿದಕೆ ಕ್ಷಮಿಸು ,ನಿನ್ನ ವಿಶಾಲವಾದ ಹೃದಯದಲ್ಲಿ ನನ್ನ ಎಷ್ಟು ಇಷ್ಟ ಪಡ್ತೀಯ ಅಂತ ಗೊತ್ತು ಆದ್ರೆ ನಿನ್ನನ್ನು ನಾನೂನು ಅಷ್ಟೇ ಇಷ್ಟ ಪಡ್ತೀನಿ ...... ಮರಿಬೇಡವೋ










Thursday, March 27, 2014

ನನ್ನ ಪ್ರೀತಿಯ boony ಗೆ ನನ್ನ ಎರಡನೇ ಪತ್ರ




ಪ್ರೀತಿಯ Boony,

ನನ್ನ ಮನದಲ್ಲಿ ನಿನ್ನ ಬಗ್ಗೆ ಇರಬಹುದು,ಅಮ್ಮನ ಬಗ್ಗೆ ಇರಬಹುದು, ನನ್ನ ಮನೆಯ ಬಗ್ಗೆ ಇರಬಹುದು.. ಇರಬಹುದಾದರೂ ಏನು? ಪ್ರೀತಿ? ಹುಡುಕುತಿದ್ದೇನೆ ಮತ್ತೂ ಗುರಿ ಸಿಗದ ಹುಡುಕಾಟವಿರಬಹುದು ಇದು....
ಪ್ರೀತಿ ಅಂದ್ರೆ ಕನಸು ಕಾಣುವುದಾ??
ಪ್ರೀತಿ ಅಂದ್ರೆ ಅಪ್ಪ ಅಮ್ಮ ನಮ್ಮ ಬಗ್ಗೆ ಕಟ್ಟಿರುವ ನೂರು ಕನಸು ನನಸು ಮಾಡೋದಾ??
ಪ್ರೀತಿ ಅಂದ್ರೆ ಮತ್ತೆ ಮತ್ತೆ ಮರೆಯಲಾಗದ ನೆನಪುಗಳೊಡನೆ ಬದುಕುವುದಾ?
ಅಪ್ಪ-ಅಮ್ಮ ನಮ್ಮನ್ನು ಹೆತ್ತಿರುತ್ತಾರೆ,ಪ್ರೀತಿಸುತ್ತಾರೆ,ಗೌರವಿಸುತ್ತಾರೆ,ಬದುಕನ್ನು-ಕನಸುಗಳನ್ನು ಕಲಿಸಿಕೊಡುತ್ತಾರೆ....ನಾನು ಅವರನ್ನು ಪ್ರೀತಿಸುತ್ತೇನೆ ಹಾಗು ಅವರು ಕೂಡ ಆದ್ದರಿಂದ ಇಲ್ಲಿ ಪ್ರೀತಿಗೆ ಒಂದಷ್ಟು ಅರ್ಥಗಳು ಇರುತ್ತದೆ ಅಲ್ಲವಾ?? 
ಒಳ್ಳೆಯ ಬದುಕನ್ನು ಕಟ್ಟಿಕೊಡುವ ಅಪ್ಪ-ಅಮ್ಮ ಹಾಗೆಯೇ ಬದುಕು ಸವೆಸಲು ಒಳ್ಳೆಯ ನಡೆ ನುಡಿಗಳನ್ನು ಹೇಳಿಕೊಟ್ಟಿರುತ್ತಾರೆ ಹಾಗೇನೆ ನಾನು ಕೂಡ ಬೆಳೆದೆ ಹಾಗೇ ಬದುಕನ್ನು ನಿಭಾಯಿಸುತ್ತ್ತೇನೆ ಆದರೆ ಪ್ರತೀ  ಹೆಜ್ಜೆಯಲ್ಲೂ ನಿನ್ನ ಹೆಜ್ಜೆಯನ್ನು ಸದಾ ನಿರೀಕ್ಷಿಸುತ್ತೇನೆ ...ನಿಂಗೆ ಇಷ್ಟ ತಾನೇ ?



ಕಣ್ಣು ಮನದ ಮಾತು ಬಿಚ್ಚಿಡುತ್ತೆ ಅಂತಾರೆ... ಪ್ರತಿ ಬಾರಿ ಕನ್ನಡಿ ಮುಂದೆ ನಿಂತು ನನ್ನ ಕಣ್ಣನ್ನು ನಾನೇ ನೋಡಿ ಪ್ರಶ್ನಿಸಿಕೊತೀನಿ ನನ್ನ ಮನದ ಮಾತು ಬಿಚ್ಚಿಡುತಿವೆಯೇ ಅವು...ನನಗೆ ಅಲ್ಲಿ ಕಣ್ಣು ಬಿಟ್ಟು ಮತ್ತೇನು ಕಾಣುವುದೇ ಇಲ್ಲ ಮತ್ತೆ ಮನದ ಮಾತು ಪ್ರಶ್ನೆ ಯಾಗಿಯೇ ಉಳಿದು ಬಿಡುತ್ತದೆ.. ಅದು ನಿಜ ಯಾರ ಕಣ್ಣಲ್ಲಿ ಯಾರ ಬಗೆಗೆ ಯಾವ ಕನಸು ನಿಚ್ಚಳವಾಗಿದೆಯೋ??? ಯಾರ ಮನವು ಏನನ್ನು ಮಾತಡುತಿರುತ್ತದೆಯೋ?? ಮತ್ತೆ ಎಲ್ಲವು ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ.....
ಪ್ರತಿ ಸಾರಿ ಮನಸಿನ ತುಂಬ ಪ್ರಶ್ನೆಗಳನ್ನೇ ತುಂಬಿಕೊಂಡು ಉತ್ತರಕ್ಕೆ ಪರದಾಡುವ ನನ್ನ ನೋಡಿ ನಗುವ ನಿನ್ನ ಕಣ್ಣಲ್ಲಿ ನನ್ನ ಮನದ ಮಾತಿವೆ ಅನಿಸುತಿದೆ...
ಈ ಎಲ್ಲ ಪರದಾಟಕ್ಕು ಕಡಿವಾಣ ಹಾಕಿ ನನ್ನ ಮನದ ತುಂಬ ಪ್ರೀತಿ ತುಂಬಿಸಲು ಬರಬೇಕಿದೆ ನೀನು ಇನ್ನೂ ಹತ್ತಿರಕ್ಕೆ......
ಯಾವಾಗಲೂ ಕಾದಿರುವೆ ನಿನಗಾಗಿ,ನಿನ್ನ ಮನದ ಪ್ರೀತಿಗಾಗಿ ......
..
.

ಬರೆಯಲಿಕ್ಕೇನೂ ಇಲ್ವೋ...ಸತ್ಯ ಈ ಮನಸ್ಸಿನ   ತುಂಬಾ ನಿನ್ನ ಮೇಲಿನ ಪ್ರೀತಿಬಿಟ್ಟೆನೂ ಇಲ್ಲ...hope u dont want  anythng more dan dat....i have so much 2 tell u...ನಾ ಯಾವಾಗ್ಲೂ ಮಲಗಿಯೂ ನಿದ್ದೆ ಬರದ ರಾತ್ರಿಗಳಲ್ಲಿ ಭಯಾನಕ ಕನಸು ಕಟ್ಟಿದ್ದೀನಿ...ಕನಸಲ್ಲೇ impossibleನೆಲ್ಲಾ possible ಮಾಡೋ ನಿನ್ನ ರೇಣು ಅಲ್ವ ನಾನು...ಅಮ್ಮನ ಮನೆಗೆ ಹೋದಾಗ ಸದ್ದೇ ಆಗದೆ ನಿನ್ನ ನೆನೆದ ರಾತ್ರಿಗಳ..ಉತ್ತರವೇ ಬರದ ನಿನ್ನೊಡನೆ ಆಡಿದ ಮಾತುಗಳು...ಕದ್ದು ಮುಚ್ಚಿ ಮೊಬ್ ಬೆಳಕಲ್ಲಿ ಪದ್ಯದ ಸಾಲು ಗೀಚಿದ್ದು.ಕಾಲೇಜ್ನಲ್ಲಿ ಕ್ಲಾಸ್ ಇಲ್ದೆ ಇದ್ದಾಗ ಇಷ್ಟವಾದ ಹಾಡುಗಳನ್ನು ನಿನಗೆ ಕಳಿಸಿದ್ದು offcourse ನಿನ್ನ replyಗಾಗಿ ಕಾದಿದ್ದು  ತುಂಬಾನೇ ಸರಿ ಬಂದಿಲ್ಲ ಕೂಡ ...ಏ! ನಿನಗೆ ಗೊತ್ತಲ್ಲಾ ರಾತ್ರಿಯೆಲ್ಲ ನಿನಗಾಗಿ ಕನಸು ಕಟ್ಟುತ್ತಿರುತ್ತೇನೆ..ನೀನು ಎಲ್ಲದರೂ ಸಿಹಿ-ಕನಸು ಕಾಣೊ ಪುಟಾಣೀ ಮಗು ತರಾ ತಾಚಿಮಾಡುತ್ತಿರುತ್ತಿಯಾ ಅಂತಾ...ಕಳ್ಳ! ನಗುತ್ತಿದ್ದಿಯಾ ಆ ನಿನ್ನ ಪುಟ್ಟ ಕಂಗಳಲ್ಲಿ ನಕ್ಕು ನಗದಂತೆ ಮಾಡೋ ನೀನು, ನಾನು ನಿನ್ನಷ್ಟೆ ಪ್ರೀತಿಸುವ ಚಂದಮಾಮ ತರ...ಈಗ ಬೇಡ ನನ್ನ ಚಂದಮಾಮನ ಮೇಲೆ ಕೋಪ.....

ನಿಜ....
ನಾನು ಸದ್ದೆ ಆಗದೆ ಗುನುಗುವ ಅದೆಷ್ಟೋ ಹಾಡುಗಳ ಭಾವ ನೀನಲ್ಲವೇನೋ ???
ಈ ಬೆಳಕು ಸರಿದು ಕತ್ತಲಾಗುವ ಮುನ್ನ ಈ ಪುಟ್ಟಾ ಮನದ ಗೂಡಿನ ಗುಬ್ಬಚ್ಚಿಮರಿ ಆಗುತ್ತಿಯಾ ಅಲ್ಲೆನೊ??
ನನ್ನ ಜೀವ ಮಿಡಿತದ ಸದ್ದು ಮುಗಿಯುವ ಮುನ್ನ ನಿನ್ನ ಕನಸೆಲ್ಲವನ್ನು ನನಗೆ ಕೊಟ್ಟು ನನಸು ಮಾಡೇ ಅಂತಾ ಕೇಳತ್ತಿಯಾ ಅಲ್ಲೆನೊ???ಯಾವಾಗಲೂ ಇಲ್ಲೇ ಇರೇ ರೇಣು ಅಂತೀಯ ಅಲ್ವೇನೋ?ಹೇಳು ????

ಮತ್ತೆ ಮತ್ತೆ ನಿನ್ನೆಸರು ಕರೆಯುತ್ತಲೇ ಇರಬೇಕು ಅನಿಸ್ತ್ತಿದೆ...ಹುಮ್... ಹಾಗೆ ನಮ್ಮ ನಾಳೆಗಳನ್ನ ಒಮ್ಮೆ ಯೋಚಿಸಿ ನೋಡಿದ್ರೆ ಪುಟ್ಟೂ ನಗುನಾ ನಾಚಿಕೆನಾ ಹುಮ್ ಎನೊ ಗೂತ್ತಿಲ್ಲಾ ಒಂತರ ಆಗೂದೊಂತು ನಿಜ...ಹಾಗೆನೇ ಒಂದು ಬಣ್ಣದ ಲೋಕದ ರಾಜ ರಾಣಿ ಆಗಿಬಿಡ್ತೀವಿ ಅಲ್ಲಾ....ಪ್ರತೀ ರಾತ್ರಿ ಜೊತೆ ನಿನ್ನ ಬೆರಳನ್ನು ಹಿಡಿದಾಗಲೇ ನನಗೆ ನೆಮ್ಮದಿಯ ನಿದ್ದೆ ಚಿನ್ನ ....ಈ ಉಸಿರಲ್ಲು ನೀನೇ ಕಣ್ಣಲೂ ನೀನೇನೆ , ನನ್ನ ಮನಸಿನ ಬಣ್ಣವೇ ನೀನಾಗಿರುವ, ನನ್ನ ನೊರೆಂಟೂ ಮಾತುಗಳಾ ಅರ್ಥ ನೀನು... ಬೇಡವೆಂದರೂ ಬಿಡಾಲಾಗದ ಪದ ನೀನು...

ನನ್ನಳೋಗಿನ ನಿನ್ನ ಕನಸುಗಳೀಗೆ ನೀಡಲೇಬೇಕಾಗಿದೆ ಒಂದು ಕಾಣಿಕೆ...
ಸಾಕಾಗದೆ ನೀಲಿ ಆಕಾಶ....ನನ್ನ ಬೆಚ್ಹನೆ ಆಪ್ಪುಗೆ....ರಾತ್ರಿಯ ಸಿಹಿ ಮುತ್ತು...
ಮತ್ತದೆ ಕನಸುಗಳು...

ಮದುವೆಯ ನಂತರವೂ ಪ್ರೀತಿ ಹಾಗೆ ಇರತ್ತೆ ಅಲ್ವೇನೋ ???ಎಲ್ರೂ ಹೇಳ್ತಾರೆ ಸ್ವಲ್ಪ ದಿನಅಂತಾ ??? ಒಂದೊಂದು ಸರಿ ಫುಲ್ ಫೀಲಿಂಗ್ ನಲ್ಲಿ ಯೋಚನೆ ಮಾಡ್ತಾ ಇರ್ತೀನಿ ನಿನ್ನೆಲ್ಲಾ ಕನಸುಗಳಿಗೆ ಸ್ಪಂದಿಸುವ ಗೆಳತಿ, ನಿನ್ನ ಸ್ವಾತಂತ್ರ್ಯದಲ್ಲಿ ಬಂದಿಯಾಗುವ ಮನಸ್ಸು,ನಿನ್ನ ನಗುವಿನಲ್ಲಿ ಬೆಳಕು ಕಾಣುವ ಹಣತೆ, ನಿನ್ನೆಲ್ಲವೂ ನನ್ನದು ಎಂದು ಹೇಳುವ ಪುಟ್ಟ ಹೊಳೆವ ಕಂಗಳ ಪೋರಿ ನಾನೇ ಅಲ್ವಾ ???
ನಾವು ತುಳಿದ ಸಪ್ತಪದಿ ನಮ್ಮ ಮದುವೆ ದಿನ ಅದೆಷ್ಟು ಮನಸ್ಸಿನ ತಳಮಳ ಅಬ್ಭಾ ! ಈಗಲೂ ನಿನ್ನೆಲ್ಲಾ ಕನಸುಗಳಿಗೆ ಸ್ಪಂದಿಸುವ ಗೆಳತಿ, ನಿನ್ನ ಸ್ವಾತಂತ್ರ್ಯದಲ್ಲಿ ಬಂದಿಯಾಗುವ ಮನಸ್ಸು,ನಿನ್ನ ನಗುವಿನಲ್ಲಿ ಬೆಳಕು ಕಾಣುವ ಹಣತೆ, ನಿನ್ನೆಲ್ಲವೂ ನನ್ನದು ಎಂದು ಹೇಳುವ ಪುಟ್ಟ ಹೊಳೆವ ಕಂಗಳ ಪೋರಿ ನಾನೇ ತಾನೇ ????



..ನಿನಗೆ ಅಂತ ಏನೇನೋ  ಗಿಫ್ಟ್  ಅನ್ಸತ್ತೆ    ತುಂಬಾ ಸರಿ   ಅದ್ರು ನಿನಗೋಸ್ಕರ  ಸ್ಪೆಷಲ್ ಗಿಫ್ಟ್  ಕೊಟ್ಟೆ ಕೊಡ್ತೀನಿ definately  ಕಣೋ .ನಮ್ಮ  ಮದುವೆ ಆಗಿ ಅಂತು ಇಂತೂ ೨ ವರ್ಷ  ಆಯಿತು.. ನಂಬೋಕೆ ಆಗ್ತಿಲ್ಲ ಜೊತೆಗೆ  ದಿನಗಳಲ್ಲಿ ಅದೆಷ್ಟ ಸರಿ ಕಿತ್ತಾಡಿಲ್ಲ ಅದೆಷ್ಟ ಸರಿ ನಕ್ಕಿಲ್ಲ.  ನೆನಪಾದಾಗ ತಾನಾಗೆ ಕಣ್ಣಲ್ಲಿ  ನೀರು ತುಂಬತ್ತೆ.ನಿನ್ನ ಬಗ್ಗೆನೇ ಯೋಚನೆ ಮಾಡೋ ಏಕೈಕ ಜೀವಿ ನಾನೇ . ನಿನಗೋಸ್ಕರ ಏನು ಕೊಟ್ರೂ ಕಮ್ಮಿನೆ ಅನ್ಸ್ತಿರತ್ತೆ ಅಷ್ಟು  ಇಷ್ಟ ಪಡ್ತೀನಿ ಪುಟ್ಟು .
ನಿಂಗೆ ಒಂದೊಂದು ಸರಿ ಬೈತಾ ಇರ್ತೀನಿ ಕಲ್ಲು ಬಂಡೆ ಅಂತಾ ಆಗ ನೀನು ಹೇಳೋ ಮಾತು ಚೆನಾಗಿದೆ "ನೀವೂ ಪ್ರೀತಿಸಿದವರ ಹೃದಯ ಕಲ್ಲು ಅಂತಾ ಗೊತ್ತಾದರೆ ಕಂಡಿತ ಖುಷಿ ಪಡಿ ಯಾಕಂದ್ರೆ ಅವ್ರ ಹೃದಯದಲ್ಲಿ ನಿಮ್ಮ ಹೆಸರು ಶಾಶ್ವತ ವಗಿರತ್ತೆ " ನೆನಪಾಗತ್ತೆ ನಗು ಬರತ್ತೆ 



ನನಗೂ ಗೊತ್ತು ಕೆಲವೊಂದು ಸರಿ ನಾನು ನಿಂಗೆ ತುಂಬಾ ಬೇಜಾರು ಮಾಡಿದಿನಿ ಹಾಗೇನೆ ನೀನು ಏನಾದ್ರು ಮಾಡಿರ್ತಿಯ ತಾನೇ ? ಆದ್ರೂ ನಾವಿಬ್ರು compro ಆಗಿರ್ತಿವಿ .Amazing ಅನ್ಸತ್ತೆ ಕೆಲವು ಸರಿ.
ಮನಸೆಂಬ ಮಂದಿರದಲ್ಲಿ ಕನಸೆಂಬ  ಸಾಗರದಲ್ಲಿ ಸದಾ ಕಾಲ ಇರಲಿ ನಮ್ಮ ಪ್ರೀತಿ

ಏನ್ ಬೇಜಾರು ಗೊತ್ತ ಮಾರ್ಚ್ ತಿಂಗಳು especially ೨೦೧೪ ಮಾರ್ಚ್ ನನಗೆ ತುಂಬಾ ಬೇಜಾರು ಮಾಡಿದೆ ಯಾಕಂದ್ರೆ ನನ್ನ ಬೂನಿ ಫುಲ್ ಬ್ಯುಸಿ ...ಅವೊತ್ತೊಂದಿನ ನೀನು ತಿರುಪತಿ ಗೆ ಹೋದಾಗ ತುಂಬಾ ಬೆಜರಾಗಿದ್ದೆ ಯಾಕಂದ್ರೆ ನಿನ್ನ mob ಸ್ವಿಚ್ ಆಫ್ ಆಗಿತ್ತು ಮತ್ತೆ ಪುನಃ ಈ ಸರಿ ಬೆಜರಗಿದ್ದೆ ಯಾಕಂದ್ರೆ mob ನೋಡೋಕು ಪುರುಸೊತ್ತಿಲ್ಲದಷ್ಟು ಕೆಲ್ಸ ನಿಂಗೆ ಇತ್ತು .ನನ್ನ ಪ್ರಾಣ ಜೀವನ ನೀನೆ 

Once in lifetime someone breaks your hear tand if you still hold that person with every broken piece...that amazing pain is called TRUE LOVE

Love is very hard to define, but love could be defined as a type of emotion which often grows from strong affection, passion, likelihood





Love scraps & quotes graphics



                                                            Together Forever






Love scraps & quotes graphics

Love is a passion that you feel for someone.You have feelings for this person like you never had before with someone in your life.Love feels like you met the one and makes you think he or she is going to be their forever. I believe in love because my  love is you 






Your Luv ,

ರೇಣು