ಪ್ರೀತಿ ಅಂದ್ರೆ ??????
ಈಗಿನ ಹುಡುಗರಿಗೆ ಕೇಳಿದ್ರೆ ಪಕ್ಕದ ಮನೆ ಅಥವಾ ಎದುರು ಮನೆ ಹುಡುಗಿ ಅಂತಾರೆ ;)
ನನಗು ಪ್ರೀತಿ ಅಂದ್ರೆ ಏನು ಅಂತ ಗೊತ್ತಿಲ್ಲರೀ .... ನನ್ನ ಪ್ರಕಾರ ಪ್ರೀತಿ ಅಂದ್ರೆ ಏನು ಅಂತ ಹೇಳಬಹುದು ಅಷ್ಟೇ ಅಲ್ವಾ?
ನನ್ನ ಭಾವಗಳು.... .ಭಾವದಿಂದ ..... ಭಾವಕ್ಕಾಗಿ...
ಹುಚ್ಚು ಹುಡುಗಿಯ ಪೆದ್ದು ಮಾತುಗಳು.....
ಮನದ ಆಸೆಗಳಿಗೆ ರೆಕ್ಕೆ ಕಟ್ಟಿ
ಕಾದಿರುವೆ ಗೆಳೆಯ......
ಪ್ರೀತಿ ಇದ್ದರೆ ಹಾರಿಸು
ಇಲ್ಲದಿದ್ದರೆ ಮತ್ತೆ ಕಾಯುವೆ ನಿನಗಾಗಿ ........
ಹೌದು ನೊಂದ ಮನಸಿನ ಗಾಯ
ವಾಸಿಯೇ ಆಗುವುದಿಲ್ಲ...
ನೋಯಿಸಿದ ನಾವು ಬಿಕ್ಕುತ್ತೇವೆ
ನೊಂದ ನೀವು ಮೌನದ ಹಾದಿ ಹಿಡಿಯುತ್ತಿರಾ.......
ಎಲ್ಲಕ್ಕೂ ಸಮಯವೇ ಕಾರಣವಂತೆ..
ಎಲ್ಲಕ್ಕೂ ಸಮಯವೇ ಉತ್ತರವಂತೆ...
ಎಲ್ಲಕ್ಕೂ ಸಮಯವೇ ಬೇಕೆಂದರೆ...
ನನ್ನ ಮನಸಿಗೆ ಸಮಯ ಅಂತ ಕರಿಯಲ........
ನನ್ನ ಮನದಲ್ಲಿ ನಿನ್ನ ಬಗ್ಗೆ ಇರಬಹುದು,ಅಮ್ಮನ ಬಗ್ಗೆ ಇರಬಹುದು, ನನ್ನ ಮನೆಯ ಬಗ್ಗೆ ಇರುವ ಪ್ರೀತಿ ನಿಮ್ಮೆಲ್ಲರಿಗೂ ಗೊತ್ತಾಗತ್ತ????
ಪ್ರೀತಿ ಅಂದ್ರೆ ಕನಸು ಕಾಣುವುದಾ??
ಪ್ರೀತಿ ಅಂದ್ರೆ ಅಪ್ಪ ಅಮ್ಮ ನಮ್ಮ ಬಗ್ಗೆ ಕಟ್ಟಿರುವ ನೂರು ಕನಸು ನನಸು ಮಾಡೋದಾ??
ಪ್ರೀತಿ ಅಂದ್ರೆ ಮತ್ತೆ ಮತ್ತೆ ಮರೆಯಲಾಗದ ನೆನಪುಗಳೊಡನೆ ಬದುಕುವುದಾ?
ಅಪ್ಪ-ಅಮ್ಮ ನಮ್ಮನ್ನು ಹೆತ್ತಿರುತ್ತಾರೆ,ಪ್ರೀತಿಸುತ್ತಾರೆ,ಗೌರವಿಸುತ್ತಾರೆ,ಬದುಕನ್ನು-ಕನಸುಗಳನ್ನು ಕಲಿಸಿಕೊಡುತ್ತಾರೆ....ನಾನು ಅವರನ್ನು ಪ್ರೀತಿಸುತ್ತೇನೆ ಹಾಗು ಅವರು ಕೂಡ ಆದ್ದರಿಂದ ಇಲ್ಲಿ ಪ್ರೀತಿಗೆ ಒಂದಷ್ಟು ಅರ್ಥಗಳು ಇರುತ್ತದೆ ಅಲ್ಲವಾ??
ಒಳ್ಳೆಯ ಬದುಕನ್ನು ಕಟ್ಟಿಕೊಡುವ ಅಪ್ಪ-ಅಮ್ಮ ಹಾಗೆಯೇ ಬದುಕು ಸವೆಸಲು ಒಳ್ಳೆಯ ಜೊತೆಗಾರ ಸಿಕ್ಕಾಗ ಸಂತೋಷ ಪತ್ತೆ ಪಡ್ತಾರೆ ಅಲ್ವಾ? ಆದರು ನಾನ್ಯಾಕೆ ವೃಥಾ ಕನಸುಗಳನ್ನು ಕಟ್ಟುತ್ತೇನೆ...
ನನಸಾಗಬೇಕು ಅಂತೇನು ಕನಸು ಕಟ್ಟುತಿಲ್ಲವಲ್ಲ ಅಂತ ಮನಸಿಗೆ ಉತ್ತರ ಕೊಟ್ಟು ಮತ್ತೆ ಯೋಚಿಸುತ್ತೇನೆ ಮತ್ಯಾಕೆ ಈ ಕನಸುಗಳು??
ಉತ್ತರ ನೀನೆ ಹೇಳಬೇಕು.....
ಹುಚ್ಚು ಕನಸು ಕಾಣಬೇಕು ಅನಿಸಿತು ಈ ಒಂಟಿತನದಲ್ಲಿ ಕಂಡಿದ್ದೇನೆ ನನಸು ಮಾಡುವ ಯಾವ ಯೋಚನೆಗಳು ಇಲ್ಲದೆ..
ಕನಸಿನ ಹಕ್ಕಿ ಹಾರದಿದ್ದರು ಹಕ್ಕಿ ನನ್ನದೇ ಎಂದೆದಿಗೂ ಪುಟ್ಟು...
ಪ್ರೀತಿ ಆಚೆ ಒಂದೆರಡು ಮಾತು .......
ಕಣ್ಣು ಮನದ ಮಾತು ಬಿಚ್ಚಿಡುತ್ತೆ ಅಂತಾರೆ...
ಪ್ರತಿ ಬಾರಿ ಕನ್ನಡಿ ಮುಂದೆ ನಿಂತು ನನ್ನ ಕಣ್ಣನ್ನು ನಾನೇ ನೋಡಿ ಪ್ರಶ್ನಿಸಿಕೊತೀನಿ ನನ್ನ ಮನದ ಮಾತು ಬಿಚ್ಚಿಡುತಿವೆಯೇ ಅವು...ನನಗೆ ಅಲ್ಲಿ ಕಣ್ಣು ಬಿಟ್ಟು ಮತ್ತೇನು ಕಾಣುವುದೇ ಇಲ್ಲ ಮತ್ತೆ ಮನದ ಮಾತು ಪ್ರಶ್ನೆ ಯಾಗಿಯೇ ಉಳಿದು ಬಿಡುತ್ತದೆ.. ಅದು ನಿಜ ಯಾರ ಕಣ್ಣಲ್ಲಿ ಯಾರ ಬಗೆಗೆ ಯಾವ ಕನಸು ನಿಚ್ಚಳವಾಗಿದೆಯೋ??? ಯಾರ ಮನವು ಏನನ್ನು ಮಾತಡುತಿರುತ್ತದೆಯೋ?? ಮತ್ತೆ ಎಲ್ಲವು ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ.....
ನಿಜ..
ನಿನ್ನ ೧ ಮಾತು... ನಾನು ಜೀವಮಾನ ಪೂರ ಹಾಡುವ ಅದೆಷ್ಟೊ ಹಾಡಿನ ಅರ್ಥ ....
ಈ ಮನಕ್ಕೆ ಹಾಡುವುದೇ ಮರೆತು ಹೋಗುವ ಮುನ್ನ ನನ್ನ ಕೈ ಹಿಡಿದು ಜೀವನ ಪೂತ್ರಿ ಜೊತೆ ನಡೆವ ಹಾಡಿಗೆ ಪದವಾಗಲಾರೆಯಾ??
wid all d love,
ಬರೆಯಲಿಕ್ಕೇನೂ ಇಲ್ಲ .ಸತ್ಯ ಈ ಮನಸ್ಸಿನ ತುಂಬಾ ಪ್ರೀತಿಬಿಟ್ಟೆನೂ ಇಲ್ಲ....ನಾ ಯಾವಾಗ್ಲೂ ಮಲಗಿಯೂ ನಿದ್ದೆ ಬರದ ರಾತ್ರಿಗಳಲ್ಲಿ ಭಯಾನಕ ಕನಸು ಕಟ್ಟಿದ್ದೀನಿ...ಸದ್ದೇ ಆಗದೆ ನಿನ್ನ ನೆನೆದ ರಾತ್ರಿಗಳ..ಉತ್ತರವೇ ಬರದ ನಿನ್ನೊಡನೆ ಆಡಿದ ಮಾತುಗಳು...ಕದ್ದು ಮುಚ್ಚಿ ಮೊಬ್ ನಲ್ಲಿ ಕಳಿಸಿದ ಮೆಸೇಜ್ ಗಳು ..ಕಳೆದ ಹುಣ್ಣಿಮೆ ರಾತ್ರಿಗಳ ಲೆಕ್ಕ ಇಟ್ಟಿದ್ದು...ಆ ಮಳೆ ಬಂದ ರಾತ್ರಿ ಮೆಲ್ಲಗೆ ಬಾಗಿಲು ತೆಗೆದು ಹೊರಹೋಗಿ ನೆನೆದು ನೆಂದ ನೆಪವನ್ನೆಲ್ಲ ನಿನ್ನ ಮೇಲೆ ಹಾಕ್ಕಿದ್ದು...ಏ! ನಿನಗೆ ಗೊತ್ತಲ್ಲಾ ರಾತ್ರಿಯೆಲ್ಲ ನಿನಗಾಗಿ ಕನಸು ಕಟ್ಟುತ್ತಿರುತ್ತೇನೆ..ನೀನು ಎಲ್ಲದರೂ ಸಿಹಿ-ಕನಸು ಕಾಣೊ ಪುಟಾಣೀ ಮಗು ಥರ ಪಾಚಿ ಮಾಡುತ್ತಿರುತ್ತಿಯ ಅಂತಾ...ಕಳ್ಳ!
ನೀನು ತಿರುಪತಿ ಗೆ ಹೋದಾಗ ನಿನ್ನ ಮೊಬೈಲ್ ಚಾರ್ಜ್ ಇಲ್ದೆ ಆಫ ಅದಾಗ ನನ್ನ ಮನಸ್ಸು ಅತ್ತಿದ್ದು ನಿಂಗೆ ಗೊತ್ತ...ನಿನ್ನ ಫ್ರೆಂಡ್ಸ್ ಜೊತೆ ನೀನು ಆಚೆ ಹೋದಾಗ ನಿನಗೋಸ್ಕರ ಕಾಯ್ತಾ ನನ್ನ ಪುಟಾಣಿ ದಿಂಬಿನಲ್ಲಿ ಬಿದ್ದ ಕಣ್ಣೀರು ಗೊತ್ತ, ನಾವಿಬ್ರು ಸೇರಿ ಮೊನ್ನೆ ಪಾನಿ ಪುರಿ ತಿಂದಾಗ ನಂಗೆ ಎಷ್ಟು ಸುಸ್ತಾಗಿದ್ರು ನೀನು ಜೊತ್ಹೆಲಿದ್ದ ಸಂತಸ ಅಷ್ಟಿಷ್ಟಲ್ಲ...ನಾವಿಬ್ರು ಸೇರಿ ಹೋಗ್ತಿದ್ದ ರಾಗಿ ಗುಡ್ಡ ದೆವಸ್ತ್ಥಾನ ...ಅ ಚಿಕ್ಕ ಪುಟ್ಟ ಸಂತಸಗಳೇ ನನಗೆ ಇಷ್ಟ..ನಾನು ಅದರಲ್ಲಿ ತುಂಬಾ ಸಂತ್ಹೊಷವಾಗಿ ಇರ್ತೀನಿ ಚಿನ್ನು.. ನೀನಿಲ್ಲದ ನಾನು ಇಲ್ಲ...ಆ ನಿನ್ನ ಪುಟ್ಟ ಕಂಗಳಲ್ಲಿ ನಕ್ಕು ನಗದಂತೆ ಮಾಡೋ ನೀನು, ನಾನು ನಿನ್ನಷ್ಟೆ ಪ್ರೀತಿಸುವ ಚಂದಮಾಮ ತರ...ಈಗ ಬೇಡ ನನ್ನ ಚಂದಮಾಮನ ಮೇಲೆ ಕೋಪ.....
ನಿಜ....
ನಾನು ಸದ್ದೆ ಆಗದೆ ಗುನುಗುವ ಅದೆಷ್ಟೋ ಹಾಡುಗಳ ಭಾವ ನೀನೆ ಗೊತ್ತ ???
ಈ ಬೆಳಕು ಸರಿದು ಕತ್ತಲಾಗುವ ಮುನ್ನ ಈ ಪುಟ್ಟಾ ಮನದ ಗೂಡಿನ ಗುಬ್ಬಚ್ಚಿಮರಿ ಆಗುತ್ತಿಯಾ ಆಲ್ವಾ??
ನನ್ನ ಜೀವ ಮಿಡಿತದ ಸದ್ದು ಮುಗಿಯುವ ಮುನ್ನ ನಿನ್ನ ಕನಸೆಲ್ಲವನ್ನು ನನಗೆ ಕೊಟ್ಟು ನನಸು ಮಾಡೇ ಅಂತಾ ಕೇಳತ್ತಿಯಾ ಅಲ್ವಾ ???
ಮತ್ತೆ ಮತ್ತೆ ನಿನ್ನೆಸರು ಕರೆಯುತ್ತಲೇ ಇರಬೇಕು ಅನಿಸ್ತ್ತಿದೆ...ಹುಮ್... ಹಾಗೆ ನಮ್ಮ ನಾಳೆಗಳನ್ನ ಒಮ್ಮೆ ಯೋಚಿಸಿ ನೋಡಿದ್ರೆ ಪುಟ್ಟೂ ನಗುನಾ ನಾಚಿಕೆನಾ ಹುಮ್ ಎನೊ ಗೂತ್ತಿಲ್ಲಾ ಒಂತರ ಆಗೂದೊಂತು ನಿಜ...ಹಾಗೆನೇ ಒಂದು ಬಣ್ಣದ ಲೋಕದ ರಾಜ ರಾಣಿ ಆಗಿಬಿಡ್ತೀವಿ ಅಲ್ಲಾ.....ಈ ರಾತ್ರಿ ಜೊತೆ ಇದ್ದಿದ್ರೆ ಕೈ ಹಿಡಿದು ಮುದ್ದುಮಾಡ್ತಿದ್ದೆ ಅಂತಾ...ಈ ಉಸಿರಲ್ಲು ಉಸಿರಾಗಿರುವ, ನನ್ನ ಮನಸಿನ ಬಣ್ಣವೇ ನೀನಾಗಿರುವ, ನನ್ನ ನೊರೆಂಟೂ ಮಾತುಗಳಾ ಅಥ್ರ ನೀನು... ಬೇಡಾವೆಂದರೂ ಬಿಡಾಲಾಗದ ಪದವು ನೀನು...
ನನ್ನಳೋಗಿನ ನಿನ್ನ ಕನಸುಗಳೀಗೆ ನೀಡಲೇಬೇಕಾಗಿದೆ ಒಂದು ಕಾಣಿಕೆ...
ಸಾಕಾಗದೆ ನೀಲಿ ಆಕಾಶ....ನನ್ನ ಬೆಚ್ಹನೆ ಆಪ್ಪುಗೆ....ರಾತ್ರಿಯ ಸಿಹಿ ಮುತ್ತು...
ಮತ್ತದೆ ಕನಸುಗಳು...
ಬಹಳ ಹಿಂದಿನಿಂದಲೂ ಕನಸು ಕಟ್ಟಿದ್ದೇ,,,ಇಗಲೂ ಕಟ್ಟುತ್ತಾ ಇದ್ದೀನಿ...
ನೀನು ನನ್ನ ಕಣ್ಣಲ್ಲಿ ಹೀಗೆ ..
ಬಹು ಮಾತಿಲ್ಲದೆ ನನ್ನ ಎಲ್ಲಾ ಮಾತುಗಳಿಗೂ ನಸುನಕ್ಕು, ಕೆಲವೊಮ್ಮೆ ನಗುವೇ ಉತ್ತರವಾಗಿ ಬಿಡುವ ಹಸನ್ಮುಖಿ, ಸದಾ ಸಹಜವಾಗೇ ವರ್ತಿಸುವ ನಾಜುಕೂ, ಅಡಂಬರವಿಲ್ಲದ ನಿವೇದನೆಗಳು, ಹೀಗೊಂದಿಷ್ಟು ನೋವಿಗೆ ಮಿಡಿಯುವ ಮನಸ್ಸು, ಸಮಾನತೆಯ ಹಂಬಲವಿರುವ ಪುಟಾಣಿ ಕನಸಿನ ಚೆಲುವ, ಮುಖ್ಯವಾಗಿ ನನ್ನ ಜೀವನದ ಸ್ನೇಹಿತ....ನಾ ನಿನ್ನ ಮಗುವಾಗಿ ಭಾವಿಸುವ ಹಾಗೆ ನೀನು ನನ್ನ ಮಗುವಾಗಿ ಜೊಪಾನ ಮಾದುವ ಭಾವ, ಸದಾ ಪ್ರೀತಿ ತುಂಬಿದ ಜಗಳಗಳು,ಮುನಿಸುಗಳು, ನಂತರ ತುಸುವಷ್ಟೆ ನಗು.....
ದೂರದ ಹಸಿರು-ಬೆಟ್ಟಗಳನ್ನು ನೋಡುತ್ತಾ... ಅಲ್ಲೊಮ್ಮೆ,ಇಲ್ಲೊಮ್ಮೆ ನಿಂತು ಮೈಮರೆತು ನಗುತ್ತಾ...ಆ ಹಸಿರನ್ನು ದಾಟಿ ಹಾರುತ್ತಾ,ಆಟವಾಡುತ್ತಾ,ಹುಡುಗಾಟವಾಡುತ್ತಾ...ಆ ಹಸಿರು ನೆಲ,ನೀಲಿ ಆಕಾಶ ಅದನ್ನು ಮೀರಿದ ನಮ್ಮಿಬ್ಬರ ಕಲರವ...ಅದ್ಬುತವಾಗಬಾರದೆ ಪ್ರಪಂಚ..ದಿನಗಳಾಗಬಾರದೆ ಸೊಗಸಿನ ಬಂಗಾರದವೂ...
ಮಲಗಿಯೂ ನಿದ್ದೆ ಬಾರದ ರಾತ್ರಿಗಳಲ್ಲಿ ಚಂದಮಾಮನನ್ನು ನೋಡುತ್ತಾ..ನಕ್ಷತ್ರಗಳನ್ನು ಕಲೆಹಾಕುತ್ತಾ...ಹೊಸ ಕನಸುಗಳ ಹೆಣೆಯುತ್ತಾ ನತ್ರಿಸುವ ಹಕ್ಕಿಯಾಗಬೇಕು...ಆ ನಿನ್ನ ಬೆಚ್ಚಗಿನ ತೋಳುಗಳಲ್ಲಿ ಮಲಗಿ,ಕನಸ ಮಾರುವ ಚೆಲುವ ಒಂದು ಕಥೆ ಹೇಳು ಅಂತಾ ಪೀಡಿಸಬೇಕು...
ಆ ರಾತ್ರಿ ನಕ್ಷತ್ರಗಳನ್ನು ಕಲೆಹಾಕುತ್ತಾ,,, ಸದ್ದಿಲ್ಲದೆ ನಿನ್ನ ಬೆಚ್ಚನೆಯ ತೊಡೆಯ ಮಗುವಾಗಬೇಕು..
.ಕಾಣುತ್ತಲೇ ಇರುತ್ತೆನೆ ಕನಸು ನನಗಾಗಿ ಅಲ್ಲ ನಿನಗಾಗಿ
ಅಲ್ಲಾ! ನಮಗಾಗಿ...
ಪ್ರೀತಿಯಿಂದ ನಿನ್ನವಳು,
LoVe YoU.......









