ಎಲ್ಲರಿಗೂ ಜೀವನದ ಬಗ್ಗೆ ಅವರವರದೇ ಆದ ಅನುಭವವಿರುತ್ತದೆ. ಹಾಗೆಯೇ ಒಬ್ಬರು ತಮ್ಮ ನೋವೆ ಜಾಸ್ತಿ ಅಂತ ತಿಳ್ಕೊಂಡ್ರೆ ಆದರೆ ನಮಗಿಂತ ಹೆಚ್ಚಿನ ನೋವು ಸಂಕಟಗಳನ್ನ ಅನುಭವಿಸಿರುವವರು ಇದ್ದಾರೆ ಈ ಪ್ರಪಂಚದಲ್ಲಿ ಅನ್ನೋದನ್ನ ಮರೆತು ಬಿಡ್ತಾರೆ , ಹಾಗೆ ನಾವು ಯೋಚನೆ ಮಾಡ್ತಾ ಹೋದ್ರೆ ಈ ಜೀವನ ಅನ್ನೋದು ಒಂದು ಟ್ರೈನ್ ಪಯಣದ ತರಹ ..ಅಲ್ಲಿ ಜನ ಅವ್ರ ಊರಲ್ಲಿ ಹತ್ತುತ್ತಾರೆ ಅವರವರ ಸ್ಟೇಷನ್ ಬಂದಾಗ ಅವರು ಇಳಿಯುತ್ತಾರೆ,ಅಷ್ಟರಲ್ಲೇ ತಮಗಾಗಿ ನಮ್ಮ ಹೃದಯದಲ್ಲಿ ಸ್ವಲ್ಪ ಜಾಗ ತಗೊಂಡು ಹೋಗ್ತಾರೆ,ನೆನಪಾಗೆ ಉಳಿತಾರೆ , ಎಲ್ಲ ಕೇವಲ ನಿಮಿತ್ತ ಅಷ್ಟೇ.ಯಾವುದು ಶಾಶ್ವತ ಅಲ್ಲ ಆದರು ನಾವು ನಂದು ನಂದು ಅಂತ ಅದೆಷ್ಟು ಹೊರಾಡ್ತೀವಿ ಅಲ್ವಾ?
?? ಛೆ..ಇಷ್ಟೇ ಲೈಫ್..ಆದರು ಎಷ್ಟೊಂದು ನೋವು ಅನುಭವಿಸ್ತೀವಿ..ಕೆಲವೊಂದು ಸರಿ ನಮಗಿಷ್ಟವಿಲ್ದಿದ್ದ್ರು ಕೆಲವೊಂದು ನಿರ್ಧಾರ ತಗೊಬೇಕಾದ ಪರಿಸ್ಥಿತಿಗಳು..ಸುಳಿಗೆ ದೋಣಿ ಸಿಲುಕಿದರೆ ಹೇಗೆ ತಾನೇ ಹೊರಗೆ ಬರಲು ಸಾದ್ಯ ಅಲ್ವಾ? ಒಟ್ಟಿನಲ್ಲಿ ಬದುಕಿನಲ್ಲಿ ಬರೋ ಸೋಳುಗಳನ್ನು ಎದುರಿಸಿ ಬದುಕಬೇಕು ಅಷ್ಟೇ....